Shri Siddharoodha Swamiji Math Trust Committee

Hubballi

www.srisiddharoodhaswamiji.in

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಇಲೈಟ್ ವತಿಯಿಂದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ & ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ ಇವರುಗಳನ್ನು ಸನ್ಮಾನಿಸಲಾಯಿತು.
Date : 01-07-2025
ದಿನಾಂಕ:-01.07.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಇಲೈಟ್ ವತಿಯಿಂದ ಲೆಕ್ಕಪರಿಶೋಧಕರ ದಿನಾಚರಣೆಯ ಅಂಗವಾಗಿ ಶ್ರೀಮಠದ ಚೇರ್‌ಮನ್ನರು ಹಾಗೂ ಲೆಕ್ಕಪರಿಶೋಧಕರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಮತ್ತು ವೈದ್ಯರ ದಿನಾಚರಣೆ ಅಂಗವಾಗಿ ಧರ್ಮದರ್ಶಿಗಳು ಹಾಗೂ ವೈದ್ಯರಾದ ಡಾ|| ಗೋವಿಂದ ಗು. ಮಣ್ಣೂರ ಇವರುಗಳನ್ನು ಸನ್ಮಾನಿಸಲಾಯಿತು. ಪತ್ರಕರ್ತರ ದಿನಾಚರಣೆಯ ಅಂಗವಾಗಿ ಶ್ರೀ ಗುರುರಾಜ ಹೂಗಾರ ಇವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಇಲೈಟ್‌ನ ಸದಸ್ಯರಾದ ಶ್ರೀ ಅವಿನಾಶ ಕುರ್ತಕೋಟಿ, ಶ್ರೀ ಅಂಬಾಪ್ರಸಾದ ಮಲ್ಯಾ, ಶ್ರೀ ವೀರು ಉಪ್ಪಿನ, ಶ್ರೀ ಅಮಿತ ಪವಾರ, ಶ್ರೀ ರವಿ ಜಿಗಳೂರು, ಶ್ರೀಮತಿ ಶೋಭಾ ಜಿಗಳೂರು, ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.